ಜನವರಿ 5, 2017

ಸಮಯವು ನೀನಾಗು
ತಪನಗಳು ಕಾಲ!ವಾಗಲಿ
ಕಾಲನ ತಪನಗಳಿಗೆ
ತಣ್ಣನೆಯೊಂದು ಕಿರುನಗು
ಸವರಿ ಬೆಚ್ಚಿಸು,
ಕಾಲನು ನೆಚ್ಚಿ ಮೆಚ್ಚಿ
ಕಲೂರಿ ನೆಗೆವ ಕಸುವಿತ್ತು
ಕಕ್ಷೆಯಾಚಿನ ನಕ್ಷೆಯ
ತೆರೆದಿಡುವ

ಜನವರಿ 14, 2012

ಕ್ರಾಂತಿ ಗೀತೆಯೊಂದಿಗೆ ಬಿಡಿಸುತ್ತಿರುವ ಚಿತ್ರ





SSLC ಅಂಕಗಣಿತದ ಪ್ರಮೇಯವನ್ನು ಹಾಡಿನ ಮೂಲಕ ಹೇಳುತ್ತಿರುವ ಆದಿ ಮತ್ತು ತಂಡ.


ಸ್ವ ರೂಪಕ್ಕೆ ಸಿಕ್ಕ ಆದರಣೆ


ಸ್ವ
-ರೂಪ,

ನನ್ನದೇ ರೂಪ, ನಾನೇ ನೋಡಿಕೊಳ್ಳುವುದು,
ನನನ್ನು ನಾನು ಇದುವರೆಗೂ ನೋಡಿದ್ದೇನೆಯೇ?
ನನ್ನ ಸಾಧ್ಯತೆಗಳೇನು?
ನನ್ನ ಬಾಧ್ಯತೆಗಳೇನು?
ನನಗೆ ಇತಿಮಿತಿಗಳಿವೆಯೇ?
ಇನ್ನೂ ಕೆಲವು ನಾವುನೋಡಿರದ ನಮ್ಮ ಚಿತ್ರಗಳನ್ನು ಎಲ್ಲರಿಗೂ ಪರಿಚಯಿಸುವ ಸಲುವಾಗಿ
ಸ್ವ-ರೂಪ ತಂಡದವರು ನಾಡಿನಾದ್ಯಂತ ಜಾಥಾ ಹೊರಟಿದ್ದಾರೆ.
ನವೆಂಬೆರ್ ನಿಂದ ಜನವರಿ ಕೊನೆಯ ವರೆಗೂ.

ಈತಂಡ ಮಂಗಳೂರಿನ
ಸ್ವ-ರೂಪ ಅಧ್ಯಯನ ಕೇಂದ್ರ,
ವೃದ್ಧಾಶ್ರಮ ರಸ್ತೆ, ಸಮೃದ್ಧಿ, ಕೊಡಿಯಾಲ್ಬೈಲ್, ಮಂಗಳೂರು.
ದೂರವಾಣಿ ೯೧೪೧೫೧೪೧೭೨
ಇ ಅಂಚೆ gopadkar.swaroopa@rediffmail.com
Web : www.swa-roopa.com ಲ್ಲಿಂದ ಹೊರಟು
ಕರ್ನಾಟಕದಾದ್ಯಂತ ಆಹ್ವಾನ ವಿದ್ದಾಲ್ಲೆಲ್ಲಾ ತಮ್ಮ ಸಂದೇಶವನ್ನು, ಮಕ್ಕಳ ಸಾಧನೆಯ,
ಗೊಂಬೆಯಾಟ ಮತ್ತು ಯಕ್ಷಗಾನದ ಮೂಲಕ
ಜನಮನದಲ್ಲಿ ವಿದ್ಯೆಯ ಅರಿವು ಮೂಡಿಸುವ ಮಹತ್ಕಾರ್ಯವನ್ನು ಮುಂದುವರಿಸಿದ್ದಾರೆ.

ಪಾಲಕರು, ಮಗು, ಸಮಾಜ ಎಲ್ಲಿ ಹಾದಿ ತಪ್ಪುತ್ತಿರಬಹುದು ಎಂಬ ಸ್ಪಷ್ಟ ಸಂದೇಶವನ್ನು ಮನದಲ್ಲಿ ಮೂಡಿಸುವ ಕೈಂಕರ್ಯಕೈಗೊಂಡಿದ್ದಾರೆ.
ಅದರ ಕೆಲವು ತುಣುಕುಗಳು,
ಚಿತ್ರಗಳು ಹೇಗೆ ಪಾಠದ ಸಾಧನಗಳಾಗುವವು,
ಇಂದಿನ ಚಿತ್ರಗೀತೆ, ಜನಪ್ರಿಯ ಜಾನಪದ ಗೀತೆಗಳನ್ನು ಪಾಠಕ್ಕೆ ಹೇಗೆ ಅಳವಡಿಸಬಹುದು?
ಹಲವು ಕಾರ್ಯಗಳನ್ನು ಹೇಗೆ ಮನಸ್ಸು ಒಟ್ಟಿಗೆ ಮಾಡಬಲ್ಲದು(ಅಷ್ಟಾವಧಾನದ ಮೂಲಕ).
ಪ್ರೇಕ್ಷಕರಿಂದ ಪಡೆದುಕೊಂಡ ೮ ವಿಷಯಗಳನ್ನು ಏಕಕಾಲದಲ್ಲಿ ದಾಖಲಿಸಿ, ಕೊನೆಯಲ್ಲಿ ಎಲ್ಲವನ್ನೂ ಪ್ರಶ್ನೆಬಂದಂತೆ ಉತ್ತರಿಸುತ್ತಾಹೋಗುವುದು.
  1. ಪ್ರಶ್ನೆ ಗಳನ್ನು ನೆನಪಿಟ್ಟುಕೊಂಡು ಎಷ್ಟು ಪ್ರಶ್ನೆ ಮತ್ತು ಅದಕ್ಕೆ ಉತ್ತರ ಸಿದ್ಧ ಪಡಿಸುತ್ತಾ ಹೋಗುವುದು.
  2. ಕೊಟ್ಟಿರುವ ೨೫ ವಸ್ತುಗಳ ಹೆಸರನ್ನು ೨೫ ಸೆಕೆಂಡಿನಲ್ಲಿ ದಾಖಲಿಸುತ್ತಾ ಹೋಗುವುದು.
  3. ಸಂಖ್ಯೆಗಳನ್ನು ಹೇಳಿದಂತೆ ದಾಖಲಿಸುವುದು.
  4. ಕಲಾವಿದನೊಬ್ಬ ಪಕ್ಕದಲ್ಲಿ ಚಿತ್ರ ಬರಯುತ್ತಿರುತ್ತಾನೆ ಅದು ಎಷ್ಟು ಮತ್ತು ಏನೇನು ಎಂದು ನೆನಪಿಟ್ಟುಕೊಳ್ಳುವುದು
  5. ಹಿಂದಿನಿಂದ ಜಾಗಂಟೆ ಎಷ್ಟು ಸಾರಿ ಬಾರಿಸಿತು ಎಂದು ನೆನಪಿಟ್ಟುಕೊಳ್ಳುವುದು.
  6. ಅಧಿಕಪ್ರಸಂಗಿ ಎಷ್ಟು ಸಾರಿ ಯಾವ್ಯಾವ ಭಂಗಿಯಲ್ಲಿ ಬಂದಿದ್ದ ಎಂದು ಹೇಳುವುದು.
  7. ಎಡಗೈಯಲ್ಲಿ ಪ್ರೇಕ್ಷಕರು ಕೊಟ್ಟ ಸಾಮಾಜಿಕ ಸಮಸ್ಯೆಯ ಚಿತ್ರ ಬಿಡಿಸುತ್ತಿರುವುದು.
  8. ಬಲಗೈಯಲ್ಲಿ ಕೊಟ್ಟಿರುವ ಕಡಲೆ ಕಾಳುಗಳನ್ನು ನಿರಂತರ ಲೆಖ್ಖ ಮಾಡುತ್ತಿರುವುದು.
ಕೊನೆಯಲ್ಲಿ ಇದರ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಕೊಡುವುದು.

ವಿಧ್ಯಾರ್ಥಿನಿಯರೇ ತರಬೇತಿ ಪಡೆದುಕೊಂಡ ಬಡಗುತಿಟ್ಟು ಯಕ್ಷಗಾನದ ಅಭಿನಯ,
ಪ್ರಸಂಗ ೪ನೇ ಪಾಠದ ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ.

ಕೊನೆಯಲ್ಲಿ ಪಾಲಕ ಶಿಕ್ಷಕ ಮತ್ತು ಸಮಾಜದ ಹಾಗು ಮಕ್ಕಳ ಮುಖ್ಯ ತೊಂದರೆಯನ್ನು ತಿಳಿಹೇಳುವ ಗೊಂಬೆಯಾಟದೊಂದಿಗೆ ಜಾಥಾ ಮುಕ್ತಾಯವಾಗುತ್ತದೆ.
ಮಕ್ಕಳಲ್ಲಿ ಹುದುಗಿರಬಹುದಾದ ದೊಡ್ಡ ಬಯಕೆ "ಕಲಿಯುವ ಹಕ್ಕು ನನ್ನ ಕೈಗೆ ಕೊಡಿ"
ಬೆಳವಣಿಗೆ ಕುಂಠಿತ ಗೊಳಿಸುವ ಬೋನ್ಸಾಯಿ ಶಿಕ್ಷಣ ನಿಲ್ಲಿಸಿ, ಎಲ್ಲಾ ವಿಷಯಗಳನ್ನು, ಮಕ್ಕಳೇ ಹಸಿವಿನಿಂದ ತಾವೇ ವಿಷಯದೊಡನೆಕಲೆತುಕೊಳ್ಳುವ ಕಲಿಕೆಗೆ ಅವಕಾಶ, ಮಾರ್ಗದರ್ಶನ ಕೊಡಿ,
ಎಲ್ಲ ಮಕ್ಕಳೂ ಜೀನಿಯಸ್, ಆದರೆ ನಮ್ಮ ಅಚ್ಚುಗಳು ಅವರನ್ನು ಕೇವಲ (ನಾವು ಕಟ್ಟುವ ಕನಸಿನ ಮನೆಗೆ ಬೇಕಾದ)ಇಟ್ಟಿಗೆಗಳನ್ನಾಗಿ ಮಾಡುತ್ತಿವೆಯೇ ಹೊರತು ಸುಂದರ ಮನೆಗಳನ್ನಲ್ಲ.
ಹಲವು ಸುಂದರ ಮನೆಗಳು ಸೇರಿ ಒಂದು ಊರು ಹಲವು ಊರುಗಳು ಸೇರಿ ಒಂದು ದೇಶ ಆಗುತ್ತವೆ.
ಎಂಬ ಸಂದೇಶವನ್ನು ನಾಡಿನಾದ್ಯಂತ ಬಿತ್ತುತ್ತಾ................................................

ಇನ್ನೂ ನಡೆಯಲಿದೆ ಜಾಥಾ
ಸ್ವ-ರೂಪ
ಅವರ ಮುಖ್ಯ ಮಾತು
ಇದು ಅದಲ್ಲ


ಜನವರಿ 11, 2012

ಬಾಲಬಳಗದಲ್ಲಿ ಕೆಲವು ಜನ ಬಂದಿದ್ರು. ಅವರ ತಂಡದ ಹೆಸರು
ಸ್ವರೂಪ ಅಧ್ಯಯನ ತಂಡ.
ನನಗೆ ಯಾಕೆ ವಿಶೇಷ ಅಂದ್ರೆ ನನ್ನ ಆಲೋಚನಾಲಹರಿ
ಅವರ ಪ್ರಯತ್ನ ಒಂದೇ ಆಗಿದಿದ್ದು.


"ಆದಿ" ಸ್ವರೂಪ ತಂಡದ ಹಾದಿ
ಸ್ವರೂಪ ತಂಡ
ಶ್ರೀ ಗೋಪಾಕರ್ ತಂಡದ ಸ್ವರೂಪ
ಇವರು ಹೇಳುವುದೇ "ಇದು ಅದಲ್ಲ"
ಹಾಗಾದರೆ ಏನು?
"ಸ್ವರೂಪ ಶಿಕ್ಷಣ" ಬದಲಾವಣೆಗಾಗಿ, ಬೆಳವಣಿಗೆಗಾಗಿ,
ಹುಡುಕಾಟಕ್ಕಾಗಿ ಮತ್ತು ಎಲ್ಲವೂ ನೆಲದ
'ಪ್ರೀತಿಗಾಗಿ'.
ಪಾಠ ಪುಸ್ತಕಗಳು, ಅದರ ಮೇಲೆ ಪರೀಕ್ಷೆಗಳು, ಅಂಕಗಳು - ಇಂಥ ಸೀಮಿತ ಚೌಕಟ್ಟಿನಲ್ಲಿರುವ ಶಿಕ್ಷಣದ ಸಂದರ್ಭದಲ್ಲಿ ಕೇವಲ ತಿಂಗಳಲ್ಲಿ ಪಾಠಗಳನ್ನು ಮುಗಿಸಿ ವಿಶೇಷ ಸಾಧನೆಗಯ್ಯಲು ಸಾಮಾನ್ಯ ವಿಧ್ಯಾರ್ಥಿಗಳಿಗೆ ಸಾಧ್ಯವಾಗುವುದಾದರೆ, ೧೦ ವರ್ಷಗಳ ದೀರ್ಘ ಸಾಂಪ್ರದಾಯಿಕ ಶಿಕ್ಷಣದಿಂದ ಮಕ್ಕಳು ಜಗತ್ತಿಗೇ ಉತ್ತಮರಾಗಲು ಸಾಧ್ಯವಿಲ್ಲವೇ?
ಪ್ರಶ್ನೆಗಳಿಗೆ ಉತ್ತರ ಹುಡುಕಲು
www.swa-roopa.com
ವಿಳಾಸಕ್ಕೆ ನೀವೇ ಭೇಟಿನೀಡಿ, ನಾನು ಅವರಂತೆ ಹೇಳಲು ಕಡಿಮೆಯವನು.




ಜನವರಿ 9, 2012



ಇಲ್ಲೇನೋ ಆಗ್ತಿದೆ,

ಕೆಲವು ಶಾಲೆಗಳು ಹೊಸದಾಗಿ ಏನೋ ಮಾಡಲು ಹೊರಟಿವೆ.
ಪರಿಸರ ಸ್ನೇಹಿ ಶಿಕ್ಷಣ, ಸಹಜ ಶಿಕ್ಷಣ, ಶಿಶುಕೆನ್ದ್ರಿತ ಶಿಕ್ಷಣ ಇನ್ನೂ ಏನೇನೋ.
ಬರ್ತೀರಾ ಧಾರವಾಡಕ್ಕೆ.
ಇಲ್ಲೊಂದು ಬಾಲಬಳಗ ಇದೆ,
ಮೈಸೂರಿಗೆ ಹೋಗ್ತೀರಾ ಅರಿವು ಶಾಲೆ ಇದೆ.
ಸುಳ್ಯಕ್ಕೆ ಹೋಗ್ತೀರಾ ಸ್ನೇಹವಿದೆ,
ಚಾಮರಾಜನಗರಕ್ಕೆ ದೀನಬಂಧು ಇದ್ದಾನೆ.
ಶಿರಸಿಗೆ ಹೋದ್ರೆ ಚಂದನ ಘಮಲು ಬಣ್ಣ.

ಇಲ್ಲೇನೋ ಆಗ್ತಿದೆ ಅಂದೆ........... ಯಾರಿಗೆ, ಯಾಕೆ ಕೇಳಲ್ವ?

ಹೊಟ್ಟೆಯಲ್ಲಿ ಸಂಕಟ,
ಪಾಲಕರಲ್ಲಿ ಗೊಂದಲ
ಕನ್ನಡ ಶಾಲೆಗಳಮೇಲೆ ಪರದೆ ಎಳೆಯುವ ಸುದ್ದಿ
ಮಕ್ಕಳಿಗೆ ಹಿಂಸೆ
ಸರ್ಕಾರಿ ಶಿಕ್ಷಕರ ಅಸಹಾಯಕತೆ
ಶಿಕ್ಷಕರ ನೋವು
ಆಡಳಿತ ಮಂಡಳಿಯವರ ತಲೆಬಿಸಿ
ಸಮಾಜದಲ್ಲಿ ನಿರ್ಲಿಪ್ತತೆ
ತಿಳಿಹೆಳುವವರ ಅಸಡ್ಡೆ
ಮಾಧ್ಯಮದವರ(ಮೀಡಿಯ) ನಿದ್ದೆ
ಸಮಾನ ಮನಸ್ಸುಗಳ ಸಂಪರ್ಕ ಇನ್ನೂ ಸಾಧ್ಯ ಆಗದೆ ಇರೋದು.
ಇತ್ಯಾದಿ ಇತ್ಯಾದಿ.

ಇದಕ್ಕೆಲ್ಲಾ ಪರಿಹಾರ ಕಂಡು"ಕೊಳ್ಳಕ್ಕೆ" ಮೊನ್ನೆ ಒಂದಷ್ಟು ಜನರು ಒಟ್ಟಾಗಿದ್ವಿ ನಿಮಗೂ ಇದರಲ್ಲಿ ಆಸಕ್ತಿ, ಆಶಕ್ತಿ ಇದ್ರೆ ನಮ್ ಜೊತೆ ಸೇರ್ಕೊಳ್ಳಿ.
ಬನ್ನಿ ಧಾರವಾಡದ ವಿದ್ಯಾವರ್ಧಕ ಸಂಘಕ್ಕೆ, ಸಂಪರ್ಕದಲ್ಲಿರಿ.

ಜೂನ್ 20, 2011


ನಮ್ ಮನೆಯ ತಾವರೆ ಕೊಳ ತಯಾರಾಗ್ತಿದೆ.

ಮೇ 30, 2011

kannada

ಮೇ 17, 2011

ಇದು ಮಾಳಗ್ರಾಮದ ಕಲ್ಲಣದಲ್ಲಿ ಕ್ಲಿಕ್ಕಿಸಿದ ಚಿತ್ರ

ಇದು ಅಂತ್ಹೊರಿಯಂ ಹೂವಿನಂತೆ ಇದೆಯಲ್ಲವೇ