ಜನ 23, 2011

ಪಾಲಕರ ಕ್ರೀಡಾ ಕೂಟ





೨೩-೦೧-೨೦೧೧ ಇದು ಬಾಲಬಳಗ ಶಾಲೆಯ ಪಾಲಕರ ಕ್ರೀಡಾ ಕೂಟದ ದಿನ

ಬೆಳೆಗ್ಗೆ ೧೧ ರಿಂದ ಆರಂಭವಾದ ಆಟಗಳು
ಸಂಜೆ ೫ ರ ವರೆಗೂ ನಡೆಯಿತು
ಮೊದಲಿಗೆ ಆಟದಮೈದಾನದಲ್ಲಿ ಗೋಣಿಚೀಲ ಓಟ, ಕಾಲಿಗೆ ಹಗ್ಗಕಟ್ಟಿ ಓದುವುದು,
ಗಂಡಸರಿಗೆ ವಾಲೀಬಾಲ್ , ಹೆಂಗಸರಿಗೆ ತ್ರೋಬಾಲ್ ಇತ್ಯಾದಿ.
ನಂತರ ಊಟಮಾಡಿದೆವು.
ಮುಂದಿನ ಆಟಗಳೇ ಮಜಾ.
೧. ಸಂಗೀತ ಕುರ್ಚಿ.
೨. ಮೊಣಕಾಲಿನಲ್ಲಿ ವಾಲೀಬಾಲ್ ಚಂಡನ್ನು ಹಿಡಿದು ಜಿಗಿಯುತ್ತಾ ಓಡುವುದು.
೩. ರಿಂಗಿನ ರಿಲೇ
೪. ಚೆಂಡನ್ನು ತಲೆಯಿಂದ ದೂಗಿಸುತ್ತಾ ಕೈ ಮತ್ತು ಕಾಳುಗಳಮೇಲೆ ನಿಂತು ಓಡುವುದು.
೫. ವಿಕೆಟನ್ನು ಹಣೆಯಿಂದ ನೆಲದಮೆಲೆನಿಲ್ಲಿಸಿ ೧೦ ಸುತ್ತು ತಿರುಗಿ ಓಡುವುದು.
ಬಹಳ ಖುಷಿಯಿಂದ ಕಳೆದೆವು. ಕೆಲವೊಂದರ ದೃಶ್ಯ ಗಳ್ಳನ್ನು
ಅಳವಡಿಸಿದ್ದೇನೆ ನೋಡಿ ಆನಂದಿಸಿ.

1 ಕಾಮೆಂಟ್‌: