ಸಂಜೀವಿನಿ ಉದ್ಯಾನವನ
ಧಾರವಾಡ ಮತ್ತು ಹುಬ್ಬಳ್ಳಿ ಮಧ್ಯೆ ಸರ್ಕಾರಿ
ಕೃಪಾಪೋಷಿತ ಸುಂದರ ತೋಟವೇ ನಾ ಹೇಳಲು ಹೊರಟಿರುವುದು.
ಒಂದಿಡೀ ದಿವಸ ಆರಾಮಾಗಿ ಸಂತಸ ಪಡಬಹುದು.
ಸ್ವಲ್ಪ ಮನೇಲಿ ತಯಾರಿ ಮಾಡ್ಬೇಕಾಗ್ತದ,
ಏನಿಲ್ಲ ಸ್ವಲ್ಪ ರೊಟ್ಟಿ ಭಾಜಿ, ಮೊಸರನ್ನದ ಬುತ್ತಿ, ಸಂಡಿಗಿ ಹಪ್ಪಳ,
ಕುಡಿಯೋ ನೀರು ಇವಿಷ್ಟು ಒಂದ್ ಸಂಣ್ ಕುಟುಂಬಕ್ಕ ಸಾಕಾಗ್ತದ.
ಬೇಕಾದ್ರ ಹಣ್ಣು ಹಂಪಲು ಒಯ್ದರ ಛಲೋ ಇರ್ತದ .
ಆಡಕ್ ಬೇಕಾದ್ರ ಚಂಡು ರಿಂಗು ಒಯ್ರಿ.
ಮುಂಜಾನಿ ೧೦ ರಿಂದ ಸಂಜಿ ೫-೩೦ರ್ ಮಟ ಅವಕಾಶ ಅಯ್ತಿ ಒಂದ್ ಗಿರ್ಮಿಟ್,
ಐಸ್ಕ್ರೇಮ್ ಅಂಗಡಿ ಐತಿ.
ದೊಡೌರಿಗ್ ೧೦ ರೂಪಾಯ್ ಮತ್ತ ಸಂಣ್ ಮಕ್ಳಿಗ್ ೫ ರು ತಿಕಿಟ್ ತಗೊಬೇಕ್ರಿ.
ಮಕ್ಳಿಗ್ ಜಾರ್ಗುಂಡಿ ಜೋಕಾಲಿ, ತಿರ್ಗೂ ಗಾಲಿ,
ಹತ್ತಿಳ್ಯಾಕ್ ಕಬ್ಣದ್ ಹಂದರ ಎಲ್ಲಾನೂ ಐತಿ.
ನಾವು, ನಮ್ ಉದಯ ಕುಲಕರ್ಣಿ ಕುಟುಂಬ
ಮಧ್ಯಾನ್ ದಿಂದ ಸಂಜಿಮಟ ಕಳ್ದು ಮನಿಗ್ ಬಂದ್ವಿ.
ಅಲ್ ಇನ್ನೋದ್ ವಿಶೇಷ ಅಂದ್ರ ಔಷಧಿ ಸಸ್ಯಗಳ ವನ ಮಾಡ್ಯಾರ,
ಒಂದ್ ನರ್ಸರಿ ಅದ, ಮಳಿಗಾಲ್ದಾಗ ಸಸಿ ಮಾರಾಟಮಾಡ್ತಾರಂತ್.
ಮಾವು, ಬೇವು. ಹಿಂಗ ಬಹಳಷ್ಟ್ ಸಸಿ ಮಾಡ್ಯಾರ.
ಒಮ್ಮ ತಪ್ದ ಧಾರವಾಡಕ ಬಂದಾಗ ಹೋಗಿ ನೋಡಿ ಬರ್ರಿ .

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ