

ಇಲ್ಲೇನೋ ಆಗ್ತಿದೆ,
ಕೆಲವು ಶಾಲೆಗಳು ಹೊಸದಾಗಿ ಏನೋ ಮಾಡಲು ಹೊರಟಿವೆ.
ಪರಿಸರ ಸ್ನೇಹಿ ಶಿಕ್ಷಣ, ಸಹಜ ಶಿಕ್ಷಣ, ಶಿಶುಕೆನ್ದ್ರಿತ ಶಿಕ್ಷಣ ಇನ್ನೂ ಏನೇನೋ.
ಬರ್ತೀರಾ ಧಾರವಾಡಕ್ಕೆ.
ಇಲ್ಲೊಂದು ಬಾಲಬಳಗ ಇದೆ,
ಮೈಸೂರಿಗೆ ಹೋಗ್ತೀರಾ ಅರಿವು ಶಾಲೆ ಇದೆ.
ಸುಳ್ಯಕ್ಕೆ ಹೋಗ್ತೀರಾ ಸ್ನೇಹವಿದೆ,
ಚಾಮರಾಜನಗರಕ್ಕೆ ದೀನಬಂಧು ಇದ್ದಾನೆ.
ಶಿರಸಿಗೆ ಹೋದ್ರೆ ಚಂದನದ ಘಮಲು ಬಣ್ಣ.
ಇಲ್ಲೇನೋ ಆಗ್ತಿದೆ ಅಂದೆ........... ಯಾರಿಗೆ, ಯಾಕೆ ಕೇಳಲ್ವ?
ಹೊಟ್ಟೆಯಲ್ಲಿ ಸಂಕಟ,
ಪಾಲಕರಲ್ಲಿ ಗೊಂದಲ
ಕನ್ನಡ ಶಾಲೆಗಳಮೇಲೆ ಪರದೆ ಎಳೆಯುವ ಸುದ್ದಿ
ಮಕ್ಕಳಿಗೆ ಹಿಂಸೆ
ಸರ್ಕಾರಿ ಶಿಕ್ಷಕರ ಅಸಹಾಯಕತೆ
ಶಿಕ್ಷಕರ ನೋವು
ಆಡಳಿತ ಮಂಡಳಿಯವರ ತಲೆಬಿಸಿ
ಸಮಾಜದಲ್ಲಿ ನಿರ್ಲಿಪ್ತತೆ
ತಿಳಿಹೆಳುವವರ ಅಸಡ್ಡೆ
ಮಾಧ್ಯಮದವರ(ಮೀಡಿಯ) ನಿದ್ದೆ
ಸಮಾನ ಮನಸ್ಸುಗಳ ಸಂಪರ್ಕ ಇನ್ನೂ ಸಾಧ್ಯ ಆಗದೆ ಇರೋದು.
ಇತ್ಯಾದಿ ಇತ್ಯಾದಿ.
ಇದಕ್ಕೆಲ್ಲಾ ಪರಿಹಾರ ಕಂಡು"ಕೊಳ್ಳಕ್ಕೆ" ಮೊನ್ನೆ ಒಂದಷ್ಟು ಜನರು ಒಟ್ಟಾಗಿದ್ವಿ ನಿಮಗೂ ಇದರಲ್ಲಿ ಆಸಕ್ತಿ, ಆಶಕ್ತಿ ಇದ್ರೆ ನಮ್ ಜೊತೆ ಸೇರ್ಕೊಳ್ಳಿ.
ಬನ್ನಿ ಧಾರವಾಡದ ವಿದ್ಯಾವರ್ಧಕ ಸಂಘಕ್ಕೆ, ಸಂಪರ್ಕದಲ್ಲಿರಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ